ಸೋಮವಾರ, ಜನವರಿ 2, 2012

ಸಿಗರೇಟ್ ಯಾಕ್ ಸೇದ್ತೀವಿ ?

ಸಿಗರೇಟ್ ಯಾಕ್ ಸೇದ್ತೀವಿ ?

ಚಳಿ ಬಂದರು ಎಳಿತೀವಿ
ಗಾಳಿ ಬಂದ್ರು ಸೇದ್ತೀವಿ
ಮಳೆ ಬಂದ್ರು ಹೊಡಿತೀವಿ
ಏನೇ ಬಂದ್ರು ಬಿಡೋದಿಲ್ಲ ಸಿಗರೇಟ್ ಕೈಯಿಂದ

ಇದೇ ಅಪರಾಧ ಯಾವಾಗ್ಲೂ ಮಾಡ್ತೀನಿ
ಅದೇ ಅನುಭವ ಸದಾ ಪಡಿತೀನಿ
ಹೊಗೆ ಯಾವಾಗ್ಲೂ ಬಾಯಿಂದ ಬಿಡ್ತೀನಿ
ಬಿಟ್ಟೆ ಬಿಡ್ತೀನಿ ಅಂಥ ಸದಾ ಹೇಳ್ತಿರ್ತೀನಿ
ಏನೇ ಬಂದ್ರು ಬಿಡೋದಿಲ್ಲ ಸಿಗರೇಟ್ ಕೈಯಿಂದ

ಬೆಳಗಾಗೆದ್ರೆ ಹೊಟ್ಟೆಗ್ಬೇಕು
ಸುಮ್ನಿದ್ದಾಗ ಮನಿಸ್ಸಿಗ್ಬೇಕು
ಖಾಲಿಯಿದ್ದಾಗ್ ಕೈಯಿಗ್ಬೇಕು
ಏನೇ ಬಂದ್ರು ಬಿಡೋದಿಲ್ಲ ಸಿಗರೇಟ್ ಕೈಯಿಂದ

ಬೈದ್ರೂಂಥ ಬಿಡೋದಿಲ್ಲ
ಗೊತ್ತಾಯ್ತೂಂಥ ಎಸಿಯೋದಿಲ್ಲ
ಸಾಕಾಯ್ತೂಂಥ ಮರೆಯೋದಿಲ್ಲ
ಏನೇ ಬಂದ್ರು ಬಿಡೋದಿಲ್ಲ ಸಿಗರೇಟ್ ಕೈಯಿಂದ

ಕಣ್ಣಿಗ್ ಕಾಣದಂಗೆ ಮರೆಲ್ನಿಂತು
ವಾಸ್ನೆ ಬರದಂಗೆ ಮಿಂಟಿ ತಿಂದು
ಟೀ ಕುಡ್ದಾಗ ಸದಾ ಒಂದು
ಬೇಡ ಅನ್ಸಿದಾಗ ಕೊನೆದೆಂದು
ಏನೇ ಬಂದ್ರು ಬಿಡೋದಿಲ್ಲ ಸಿಗರೇಟ್ ಕೈಯಿಂದ